ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಧ್ಯೇಯೋದ್ದೇಶಗಳು:

 

ಈಡಿಗ ಸಮುದಾಯದ ಎಲ್ಲಾ ನೌಕರರ ನಡುವೆ ಸ್ನೇಹ, ಸದ್ಭಾವನೆ, ಸೌಹಾರ್ದತೆಯನ್ನು, ಕ್ಷೇಮಾಭಿವೃದ್ಧಿಯನ್ನು ಬೆಳೆಸುವುದು.

ಈಡಿಗ ಸಮುದಾಯದ ಎಲ್ಲಾ ಒಳ ಪಂಗಡದ ಸದಸ್ಯರಲ್ಲಿ ಭಾವೈಕ್ಯತೆಯನ್ನು ಕಲ್ಪಿಸುವುದು ಮತ್ತು ಎಲ್ಲಾ ಒಳಪಂಗಡಗಳೊಂದಿಗೆ ವೈವಾಹಿಕ ಸಂಬಂಧಗಳನ್ನು ಪ್ರೋತ್ಸಾಹಿಸುವುದು.

ಈಡಿಗ ಪದದ ಅರ್ಥ:- ಈ ಪದದಲ್ಲಿ ಈಡಿಗ, ಇಡಿಗ, ಭಂಡಾರಿ, ಬೆಲ್ಚದ್, ಬಿಲ್ಲವ, ಪೂಜಾರಿ, ದೀವರ, ಹಾಲಕ್ಷತ್ರಿಯ,  ದೇಶಭಂಡಾರಿ, ದೇವರ, ದೇವರ ಮಕ್ಕಳು/ದೀವರ ಮಕ್ಕಳು, ಈಳಿಗಾ, ಇಳವ, ಗಾಮಲ್ಲ, ಗೌಂಡ್ಲ, ಹಳೆಪೈಕರು, ಹಳೆ ಪೈಕ್,  ಈಳವನ್, ಕಲಾಲ, ಮಲಯಾಳಿ ಬಿಲ್ಲವ, ನಾಡಾರ್, ನಾಮಧಾರಿ, ಥಿಯಾನ್/ಥಿಯ್ಯಾ, ಎಳಿಗಾ, ಗೂಂಡ್ಲ, ತಿಯಾನ್ / ಥಿಯ್ಯಾನ್ ಹೀಗೆ 26 ಒಳ ಪಂಗಡಗಳ ಪರ್ಯಾಯ ಹೆಸರುಗಳನ್ನು ಹೊಂದಿದೆ.

ವಿವಿಧ ಭಾಗಗಳಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ / ಸೇವೆಯಲ್ಲಿದ್ದ ಈಡಿಗ ನೌಕರರಲ್ಲಿ ಪರಸ್ಪರ ಮೈತ್ರಿಯನ್ನು ಬೆಳೆಸುವುದು ಮತ್ತು ಸಮಾಜೋಪಯುಕ್ತ ಸತ್ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವುದು.

ಈಡಿಗ ಜನಾಂಗದ ಸನಾತನ ಸಂಸ್ಕೃತಿಯ ಬಗ್ಗೆ ಸಂಶೋಧನಾತ್ಮಕ ವಿವರಗಳನ್ನು ಕಲೆಹಾಕುವುದು, ಈ ಬಗ್ಗೆ ಗ್ರಂಥಗಳನ್ನು ಮತ್ತು ವಿಶಿಷ್ಟ ಸಾಧನೆ ಮಾಡಿದ ಜನಾಂಗದ ನೇತಾರರ ಬಗ್ಗೆ ವ್ಯಕ್ತಿ ಪರಿಚಯ ಪುಸ್ತಕಗಳನ್ನು ಪ್ರಕಟಿಸಲು ಸಹಾಯ ನೀಡುವುದು/ಪ್ರಕಟಿಸಿ ವಿತರಿಸುವುದು.

ರಾಜ್ಯದ ಯಾವುದೇ ಭಾಗದಲ್ಲಿ ಅವಶ್ಯವಿದ್ದರೆ ನಿವೃತ್ತ ನೌಕರರ ಸಹಯೋಗದೊಂದಿಗೆ ವಿದ್ಯಾಸಂಸ್ಥೆಗಳನ್ನು, ವಿದ್ಯಾರ್ಥಿನಿಲಯಗಳನ್ನು, ಗ್ರಂಥಭಂಡಾರಗಳನ್ನು, ಧಾರ್ಮಿಕಕೇಂದ್ರಗಳನ್ನು ಮತ್ತು ವೃದ್ಧಾಶ್ರಮಗಳನ್ನು ನಡೆಸಲು ಪ್ರೋತ್ಸಾಹಿಸುವುದು.

ಚಿತ್ರಕಲೆ, ನೃತ್ಯ, ಸಂಗೀತ,ಸಾಹಿತ್ಯ ಅಭಿನಯ, ಲಲಿತಕಲೆ, ಶಿಲ್ಪಕಲೆ ಮತ್ತು ಕರಕುಶಲ ಮುಂತಾದ ಕಲೆಗಳಲ್ಲಿ ನೌಕರರ ಕುಟುಂಬದ ಸದಸ್ಯರು ತರಬೇತಿ ಪಡೆಯಲು ತರಬೇತಿ ಕಾರ್ಯಾಗಾರವನ್ನು ಆಯೋಜಿಸುವುದು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಬೆಂಗಳೂರು ಇವರು ಕೈಗೊಳ್ಳುವ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದು.

ಅರ್ಹ ವಿದ್ಯಾರ್ಥಿಗಳಿಗೆ ಐಎಎಸ್(IAS) ಕೆಎಎಸ್(KAS) ಐಎಫ್‌ಎಸ್(IFS) ವೈಜ್ಞಾನಿಕ ಹಾಗೂ ಇತರೆ ಉನ್ನತ ವಿದ್ಯಾಭ್ಯಾಸಕ್ಕೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುವುದು ಮತ್ತು ಇವುಗಳ ಬಗ್ಗೆ ಮಾಹಿತಿ, ತರಬೇತಿ, ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವುದು.

ಸೌಹಾರ್ದಯುತವಾದ ಕ್ರೀಡಾ ಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಕ್ರಮಗಳು, ಸಾಮೂಹಿಕ ಪ್ರವಾಸ, ಯಾತ್ರೆಗಳನ್ನು ಆಯೋಜಿಸಿ ಪರಸ್ಪರ ಸೌಹಾರ್ದತೆ ಮತ್ತು ಕೌಟುಂಬಿಕ ಕ್ಷೇಮಾಭಿವೃದ್ಧಿಯನ್ನು ಮತ್ತು ಮಾನಸಿಕ ಸ್ವಾಸ್ಥತೆಯನ್ನು ಬೆಳೆಸಿಕೊಳ್ಳುವುದು.

ಪ್ರಮುಖ ಕೇಂದ್ರ ಸ್ಥಳಗಳಲ್ಲಿ ಸಮುದಾಯ ಭವನ ಮತ್ತು ಅತಿಥಿ ಗೃಹಗಳನ್ನು ನಿರ್ಮಿಸುವುದರಲ್ಲಿ ಸಹಕರಿಸುವುದು.

ಹೊಸ ಸದಸ್ಯರನ್ನು ಸಂಘಕ್ಕೆ ಸ್ವಾಗತಿಸುವುದು ಮತ್ತು ನಿವೃತ್ತ ಸದಸ್ಯರನ್ನು ಗೌರವಿಸುವುದು, ಸನ್ಮಾನ ಸಮಾರಂಭಗಳು ನಡೆಸುವುದನ್ನು ಪ್ರೋತ್ಸಾಹಿಸುವುದು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಹಾಗೂ ಇತರ ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘವು ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು.

ಈಡಿಗ ವಿದ್ಯಾಥಿಗಳು ದೇಶದ ಮುಖ್ಯ ವಾಹಿನಿಯಲ್ಲಿ ಸೇರಿ ಬೆಳೆಯುವಂತೆ ಅವರಲ್ಲಿ ನೈತಿಕ, ಮಾನಸಿಕ ಸ್ಥೈರ್ಯ , ಶಾರೀರಿಕ ಸಾಮರ್ಥ್ಯಗಳ ಅಭಿವೃದ್ಧಿ ಪಡಿಸುವುದು. ಜೊತೆಗೆ ವಾಣಿಜ್ಯ, ಔದ್ಯಮಿಕ, ತಾಂತ್ರಿಕ, ವೈಜ್ಞಾನಿಕ ಜ್ಞಾನಗಳನ್ನು ವೃದ್ಧಿಸಲು ಶಿಕ್ಷಣ/ತರಬೇತಿ ಕೊಡಿಸುವುದು.

ಸಮಾಜದ ಸಂಸ್ಕೃತಿ / ಧಾರ್ಮಿಕ ಉನ್ನತಿಗಳ ಸಂಬಂಧಿಸಿದಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಈ ಸಂಘದ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುತ್ತದೆ (ಕರ್ನಾಟಕ ರಾಜ್ಯದಲ್ಲಿ ಜನಿಸಿ ದೇಶ/ವಿದೇಶಗಳ ಯಾವುದೇ ಭಾಗದ ಸಮಾಜ ಬಾಂಧವರು ಈ ಸಂಘದ ಕಾರ್ಯವ್ಯಾಪ್ತಿಗೆ ಒಳಪಡುತ್ತಾರೆ).

ಈ ಸಂಘಕ್ಕೆ ಯಾವುದೇ ಮೂಲದಿಂದ ಆದಾಯ ಬಂದರೂ ಅದನ್ನು ಸಂಘದ ಅಭಿವೃದ್ಧಿಗೆ ಉಪಯೋಗಿಸಬೇಕೇ ಹೊರತು ಸಂಘದ ಸದಸ್ಯರಿಗೆ ಹಂಚತಕ್ಕದ್ದಲ್ಲ.

ಈ ಸಂಘದ ನೊಂದಣಿ ಕಾರ್ಯನಿರ್ವಹಣಾ ಅಧಿಕಾರವನ್ನು ಸಂಘದ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಲಾಗಿದೆ.