ಬೆಂಗಳೂರಿನಲ್ಲಿ 1944 ರಲ್ಲಿ ಅಸ್ತಿತ್ವಕ್ಕೆ ಬಂದ ಈಡಿಗ ಸಂಘದ ವಿದ್ಯಾರ್ಥಿನಿಲಯ ಸ್ಥಾಪನೆಯಾಯಿತು. 50 ರ ದಶಕದಲ್ಲಿ ವಿದ್ಯಾಭ್ಯಾಸ ಮಾಡಿದ ಪದವಿ ಪಡೆದುಕೊಂಡ ಅನೇಕರು ಮುಂದೆ  ಪ್ರತಿಷ್ಠಿತ ಸ್ಥಾನಗಳನ್ನು ಗಳಿಸಿಕೊಂಡರು. ಅವರಲ್ಲಿ ಶ್ರೀ ಕಾಗೊಡು ತಿಮ್ಮಪ್ಪನವರು,ಶ್ರೀ ಎನ್. ಆರ್. ಸಣ್ಣಪ್ಪ,ಶ್ರೀ ಎಸ್. ಪಿ. ಮುನಿಯಪ್ಪ, ಶ್ರೀ ದಾಸೇಗೌಡ, ಶ್ರೀ ವಿಜಯನರಸಿಂಹ, ಶ್ರೀ ಹೆಚ್. ಬಿ. ಸೀಬಯ್ಯ, ಶ್ರೀ ಜಿ ಭಗವಾನ್ ಮೊದಲಾದವರು ಪ್ರಮುಖ ರಾಗಿದ್ದಾರೆ.

ಶ್ರೀ ಜಿ .ಭಗವಾನ್ ರವರು ಫೋಟೋಗ್ರಫಿ ಯನ್ನು ಕಲಿತು ಪ್ರಜಾವಾಣಿ ಪತ್ರಿಕೆ ಬಳಗ ಸೇರಿದರು. ಕಾಗೋಡು ತಿಮ್ಮಪ್ಪನವರು ಕಾನೂನು ಪದವಿಗಳಿಸಿ ಶಿವಮೊಗ್ಗದ ಸಾಗರದಲ್ಲಿ ವಕೀಲ ವೃತ್ತಿಯನ್ನು ನಡೆಸಿದರು. ಮುಂದೆ ಅವರು ಸಾರ್ವಜನಿಕ ಜೀವನ ಪ್ರವೇಶಿಸಿ ಶಾಸಕರಾಗಿ, ಸಚಿವರಾಗಿ, ವಿಧಾನಸಭೆಯ ಸ್ಪೀಕರ್ ರಾಗಿ ಯಶಸ್ವಿಯಾದರು. ಶ್ರೀ ಎನ್‌.ಸಿ. ಮುನಿಯಪ್ಪ ಇಂಜಿನಿಯರ್ ಆಗಿ ಸರ್ಕಾರಿ ಸೇವೆ ಸೇರಿದರು. ಶ್ರೀ ದಾಸೇಗೌಡರು ಮೊದಲ ದರ್ಜೆಯ ಗುತ್ತಿಗೆದಾರರಾಗಿ ಖ್ಯಾತರಾದರು.ಶ್ರೀ ಲಕ್ಷ್ಮಿ ನರಸಯ್ಶನವರು ಕಾಲೇಜು ಉಪನ್ಯಾಸಕರಾದರು. ಶ್ರೀ ವಿಜಯನರಸಿಂಹ ಬೇಸಾಯದ ಬದುಕಿನಲ್ಲಿ ಮಾದರಿ ರೈತರಾದರು. ಡಾಕ್ಟರ್ ಸಣ್ಣಪ್ಪನವರು ಎಲ್.ಎಂ.ಪಿ ಪದವಿ ಮುಗಿಸಿ ಕೋಲಾರ ಜಿಲ್ಲೆಯ ಕೊತ್ತನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸರ್ಕಾರಿ ಸೇವೆಯನ್ನು ಆರಂಭಿಸಿದರು. ದಶಕಗಳ ಕಾಲ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸಿ 1989ರಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಲು ಬಂದರು. ತಮ್ಮ ಹಾಸ್ಟೆಲ್ ವಾಸದ ದಿನಗಳನ್ನು ನೆನೆಸಿಕೊಂಡು ನೌಕರ ಸಂಘವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಈ ಪ್ರಸ್ತಾಪಕ್ಕೆ ಜೊತೆಯಾದವರು ಶ್ರೀ ಎಸ್. ಪಿ.ಮುನಿಯಪ್ಪ, ದಾಸೇಗೌಡ, ವಿಜಯನರಸಿಂಹ, ಜಿ ಭಗವಾನ್ ರಾಮಕೃಷ್ಣ, ಗಾಂಧಿ, ಎನ್. ಕೆ.ಶ್ರೀನಿವಾಸ್, ಎಚ್. ಬಿ.ಸೀಬಯ್ಯ,ಶ್ರೀ ಎಚ್. ಆರ್. ಗವಿಯಪ್ಪ, ಶ್ರೀ ಕೆ. ಕೃಷ್ಣಸ್ವಾಮಿ, ಎಚ್. ಕೆ .ಲಕ್ಷ್ಮಣ್, ಡಾಕ್ಟರ್ ಗುರಪ್ಪ, ಈ ಎನ್.ಕೃಷ್ಣಪ್ಪ.

1994 ರ ಮೇ ತಿಂಗಳ 8 ರಂದು ಡಾಕ್ಟರ್ ಸಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಅನೌಪಚಾರಿಕ ಸರ್ವ ಸದಸ್ಯರ ಸಭೆ ನಡೆದು ಬೆಂಗಳೂರು ಈಡಿಗ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪನೆಗೆ ನಿರ್ಣಯ ಅಂಗೀಕಾರವಾಯಿತು. ನಂತರ ಸಂಘದ ರಚನೆಗೆ ಅಗತ್ಯವಾದ ಬೈಲಾ ರೂಪಿಸಿ “ಬೆಂಗಳೂರು ಈಡಿಗ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿ ಸಂಘ”ವನ್ನು ನೊoದಣಿ ಮಾಡಲಾಯಿತು. ಸಂಘದ ನಿಧಿ ಸಂಗ್ರಹಕ್ಕಾಗಿ ಈಡಿಗ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾಗಿದ್ದು,  ಈಗ ವಿವಿಧ ಇಲಾಖೆಗಳಲ್ಲಿ   ಸೇವೆಯಲ್ಲಿ  ಕ್ರಿಯಶೀಲರಾಗಿರುವ ನಮ್ಮವರು ಸೇರಿದಾಗ ರೂಪುಗೊಂಡ ಚಿಂತನೆಯೇ , ” ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ”.  ಅದರಂತೆ  ಶ್ರೀ ನಾಗಪ್ಪ ಮತ್ತು ಶ್ರೀ ಇ. ಎಸ್. ರತ್ನಾಕರವರು ಸಂಚಾಲಕರಾಗಿ ಸಮಾನ ಮನಸ್ಕ ಈಡಿಗ ನೌಕರ ಬಂಧುಗಳನ್ನು ಸಂಘಟಿಸಿದ ಪರಿಣಾಮ, 2005 ಮೇ 7 ರಂದು ಸ್ಥಾಪನೆಯ ಬಗ್ಗೆ ಮೊದಲ  ಸಬೆ ನಡೆಯಿತು. ಸಭೆಯಲ್ಲಿ ಬೈಲಾ ರೂಪಿಸಿ ಸಂಘದ ಉದ್ದೇಶಗಳನ್ನು ಪಟ್ಟಿ ಮಾಡಿ ಸಂಘವನ್ನು ನೋಂದಾಯಿಸುವ ಸಿದ್ಧತೆ ನಡೆಸುವುದಕ್ಕೆ “ಕಾರ್ಯಕಾರಿ ಸಮಿತಿ”ಯನ್ನು ರಚಿಸಲಾಯಿತು.

ಶ್ರೀ ಆರ್. ಜಗದೀಶ್ ಪ್ರಸಾದ್, (ಅಧ್ಯಕ್ಷ) ಶ್ರೀ ನಾಗೇಶ್ ಕೆ. ನಾಯಕ್, ಶ್ರೀ ಹೊಳೆಯಪ್ಪ ಸಿ ನಾಯಕ್,( ಉಪಾಧ್ಯಕ್ಷರು) ಶ್ರೀ ಎಚ್. ಟಿ.ಮೋಹನ್ ದಾಸ್, (ಪ್ರಧಾನ ಕಾರ್ಯದರ್ಶಿ) ಶ್ರೀ ಎಂ.ಟಿ ವಾಸುದೇವರಾವ್( ಖಜಾಂಜಿ). ಯಾಗಿ ಅಧಿಕಾರ ಸ್ವೀಕರಿಸಿದರು.

2005 ನವಂಬರ್ 4 ರಂದು ಬೈಲಾ ಮತ್ತು ನಿಯಮಗಳನ್ನು ಅಂತಿಮಗೊಳಿಸಲು ಸಭೆ ಸೇರಲಾಯಿತು. ಅದೇ ತಿಂಗಳಲ್ಲಿ “ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ”ವನ್ನು ನೊಂದಣಿ ಮಾಡಲಾಯಿತು.

2005- 06ರ ಸಾಲಿಗೆ  ಅರ್.ಜಗದೀಶ್ ಪ್ರಸಾದ್ ಅಧ್ಯಕ್ಷರಾಗಿ, ನಾಗೇಶ್ ಕೆ. ನಾಯಕ್, ಹೊಳೆಯಪ್ಪ ಸಿ. ನಾಯ್ಕ್, (ಉಪಾಧ್ಯಕ್ಷರು) ಎಚ್. ಟಿ. ಮೋಹನ್ ದಾಸ್ ( ಪ್ರಧಾನ ಕಾರ್ಯದರ್ಶಿ) ಎಮ್. ಟಿ. ವಾಸುದೇವರಾವ್. (ಖಜಾಂಜಿ)ಯಾಗಿ ಆಯ್ಕೆಯಾದರು.

2006-07ನೇ ಸಾಲಿಗೆ  ಇದೇ ತಂಡ ಪುನರಾಯ್ಕೆ ಆಯಿತು.                     

2007 -08 ಸಾಲಿಗೆ ಜಗದೀಶ್ ಪ್ರಸಾದ್,(ಅಧ್ಯಕ್ಷ) ಎಚ್. ಟಿ. ಮೋಹ ದಾಸ್, (ಉಪಾಧ್ಯಕ್ಷರು) ಟಿ. ನರಸಿಂಹಸ್ವಾಮಿ, (ಪ್ರಧಾನ ಕಾರ್ಯದರ್ಶಿ) ಎಂ.ಟಿ ವಾಸುದೇವರಾವ್, (ಖಜಾಂಜಿ) ಸೇವೆ ಸಲ್ಲಿಸಿದರು.

2005 ರಿಂದ 2011ರ ಅವಧಿಯಲ್ಲಿದ್ದ ಆರ್. ಜಗದೀಶ್ ಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡವು ಸಂಘದ ಸದಸ್ಯತ್ವವನ್ನು ವಿಸ್ತರಿಸಿತು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಪದ್ಧತಿಯನ್ನು ಆರಂಭಿಸಿತು.

2010 ಜೂನ್ 13ರಂದು ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಟೌನ್ ಹಾಲ್ ನಲ್ಲಿ ನೌಕರರ ಸದಸ್ಯತ್ವವನ್ನು ನೊಂದಾಯಿಸುವುದಕ್ಕೆ ಸಂಬಂಧಿಸಿದ ಕಾರ್ಯಗಾರವನ್ನು ಕೇಂದ್ರ ಸಂಘದ ಸಹಕಾರದೊಂದಿಗೆ ಸಂಯೋಜಿಸಲಾಯಿತು .ಅದಕ್ಕೆ ಉಪಾಧ್ಯಕ್ಷ ಶ್ರೀ. ಶಿವಾನಂದ್ ಸಾರಥ್ಯವನ್ನು ವಹಿಸಿದರು.

2011 ರಿಂದ 14ರ ವರೆಗೆ ಆಯ್ಕೆಯಾದ ಆಡಳಿತ ಮಂಡಳಿ ಎಚ್. ಎಲ್. ಶಿವಾನಂದ, (ಅಧ್ಯಕ್ಷರು) ಲಕ್ಷ್ಮೀನರಸಯ್ಯ, ಡಾಕ್ಟರ್ ಟಿ .ಎಸ್ .ಸುರೇಶ್, (ಉಪಾಧ್ಯಕ್ಷರು) ನರಸಿಂಹಸ್ವಾಮಿ,(ಪ್ರಧಾನ ಕಾರ್ಯದರ್ಶಿ)ಜಿ. ಮಂಜಪ್ಪ,( ಖಜಾಂಜಿ) ಸೇವೆ ಸಲ್ಲಿಸಿದರು.. 2014 ಜನವರಿ 12ರಂದು ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ ನಲ್ಲಿ “ಚಿಂತನ ಮಂಥನ ಶಿಬಿರ” ನಡೆಸಲಾಯಿತು.          

ಎಸ್‍.ಎಸ್.ಎಲ್‍.ಸಿ, ಪಿಯುಸಿ ಓದಿದ್ದ ಯುವಕ ಯುವತಿಯರಿಗೆ ಉದ್ಯೋಗ ಪಡೆಯುವ ಸಾಮರ್ಥ್ಯ ಹೆಚ್ಚಿಸುವ ತರಬೇತಿಯನ್ನು ಸಂಸ್ಥೆಯ ಮೂಲಕ ಕೊಡಿಸುವ ಯೋಜನೆಯಂತೆ 2011 ಜೂನ್ 8 ರಂದು ಶಿವಮೊಗ್ಗದಲ್ಲಿ, 2011ರ ಜೂನ್ 28ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟ ದಲ್ಲಿ ಶಿಬಿರಗಳು ಪ್ರಾರಂಭಿಸಲಾಯಿತು. “ಎಜುಬ್ರೀಜ್” ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ “ಉದ್ಯೋಗ ಪಡೆಯುವ ಸಾಮರ್ಥ್ಯ ಹೆಚ್ಚಿಸುವ ತರಬೇತಿ”ಯನ್ನು ನಮ್ಮ  ಸಮುದಾಯದ ನೂರಾರು ಯುವ ಜನರು  ಪಡೆದರು. ಈ ವಿಷಯ ನೌಕರ ಸಂಘದ ಹೆಮ್ಮೆಯಾಗಿದೆ .  ನಮ್ಮ ಸಮುದಾಯದ ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಜನಾಂಗದ ಆಯ್ದ ಪದವೀದರರಿಗೆ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುವುದಕ್ಕೆ ತರಬೇತಿ ಕೊಡಿಸುವ ಕಾರ್ಯಕ್ರಮವನ್ನು ರೂಪಿಸಲಾಯಿತು .

ಜನಾಂಗದ ಹಿರಿಯರಿಂದ ಮತ್ತು ಜನಾಂಗದ ಅಧಿಕಾರಿಗಳಿಂದ ದೇಣಿಗೆ ಸಂಗ್ರಹಿಸಿ 40 ಕ್ಕೂ ಹೆಚ್ಚಿನ ಸಂಖ್ಯೆಯ ಉತ್ಸಾಹಿ ಪದವೀಧರರಿಗೆ “ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ” ಕೊಡಿಸಲು ವ್ಯವಸ್ಥೆ ಮಾಡಲಾಯಿತು. ಈ ಯೋಜನೆಗಾಗಿ ಉದಾರವಾಗಿ ದೇಣಿಗೆ ನೀಡಿದ್ದ ಅಂದಿನ ಸಂಘದ ಅಧ್ಯಕ್ಷರು ಶ್ರೀ ಜೆ. ಪಿ. ನಾರಾಯಣಸ್ವಾಮಿಯವರು, ಉಪಾಧ್ಯಕ್ಷ ಶ್ರೀ.ಎಂ. ತಿಮ್ಮೇಗೌಡರು ಜನಾಂಗದ ಇನ್ನೊಬ್ಬ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪ ಅವರಿಗೆ ನೌಕರ ಸಂಘದ ಈ ಪ್ರಯತ್ನದ ಬಗ್ಗೆ ಮನವರಿಕೆ ಮಾಡಿಕೊಟ್ಟ ಪರಿಣಾಮವಾಗಿ ಜಾಲಪ್ಪನವರು ಈ ಯೋಜನೆಯಲ್ಲಿ ಆಸಕ್ತಿ ವಹಿಸಿದರು. ವರಿಷ್ಠರು ನೌಕರ ಸಂಘದ ನಮ್ಮ ಯುವ ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಿಸುವ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ರೂಪಿಸಲು ನೆರವಾದರು.ಅದಕ್ಕಾಗಿ ನೌಕರ ಸಂಘದ ಪ್ರತಿನಿಧಿಗಳು, ಕೇಂದ್ರ ಸಂಘದ ಪ್ರತಿನಿಧಿಗಳು ಒಟ್ಟಾಗಿ ಸೇರಿ” ಶ್ರೀದೇವರಾಜು ಅರಸು ಎಜುಕೇಶನಲ್ ಟ್ರಸ್ಟ್ ಫಾರ್ ಬ್ಯಾಕ್ವರ್ಡ್ ಕ್ಲಾಸೆಸ್ “ ಟ್ರಸ್ಟ್ ರಚಿಸಿದರು. ಹಾಗೆ ಅಸ್ತಿತ್ವಕ್ಕೆ ಬಂದಿದ್ದು” ಜಾಲಪ್ಪ ಅಕಾಡೆಮಿ” ಅದರಲ್ಲಿ ನೌಕರ ಸಂಘದ ಪ್ರತಿನಿಧಿಗಳಾಗಿ ಹೆಚ್. ಎಲ್. ಶಿವಾನಂದ  , ಲಕ್ಷ್ಮಿ ನರಸಯ್ಯ, ಟಿ ನರಸಿಂಹಸ್ವಾಮಿ ,ಲಕ್ಷ್ಮಣ ಕೊಡಸೆ ಮತ್ತು ಪ್ರೊಫೆಸರ್. ಜೆ. ಶಿವರಾಜ್ ಕೇಂದ್ರ ಸಂಘದ ಪ್ರತಿನಿಧಿಗಳಾಗಿ ಜೆ.ಪಿ. ನಾರಾಯಣಸ್ವಾಮಿಯವರು, ಎಂ. ತಿಮ್ಮೇಗೌಡರು,.ಜಿ ಹನುಮಂತರಾಜು, ಎನ್. ಉದಯ, “ದೇವರಾಜ ಅರಸು ಟ್ರಸ್ಟ್ ಫಾರ್ ಬ್ಯಾಕ್ವರ್ಡ್ ಕ್ಲಾಸಸ್ ಸಂಸ್ಥೆ” ಪ್ರತಿನಿಧಿಯಾಗಿ ಶ್ರೀ ಜಿ. ಎಚ್. ನಾಗರಾಜು ಮತ್ತು ಜಾಲಪ್ಪ ಅವರ ಕುಟುಂಬದ ಪ್ರತಿನಿಧಿಯಾಗಿ ಶ್ರೀ ಜೆ. ರಾಕೇಶ್ ಅವರನ್ನು ನೇಮಿಸಲಾಯಿತು. ಎಚ್. ಎಲ್. ಶಿವಾನಂದ ಅವರು ಜಾಲಪ್ಪ ಅಕಾಡೆಮಿ ಅಧ್ಯಕ್ಷರಾಗಿ, ಲಕ್ಷ್ಮಿ ನರಸಯ್ಯ ಕಾರ್ಯದರ್ಶಿಯಾಗಿ ನೇಮಕಗೊಂಡರು.

2015ರ ಮೇ 16ರಂದು ಅಸ್ತಿತ್ವಕ್ಕೆ ಬಂದ ಆರ್. ಎಲ್. ಜಾಲಪ್ಪ ಅಕಾಡೆಮಿಯಲ್ಲಿ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಲ್ಲಿ ನೌಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು ಮೊದಲ ವರ್ಷ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ಇಲ್ಲಿ ಸ್ಮರಿಸಬೇಕು.

2017ರಲ್ಲಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಚ್. ಟಿ.ಮೋಹನ್ ದಾಸ್  ಸಮುದಾಯದ ನೌಕರರ ಸಂಘಟನೆಯನ್ನು ಮುಂದುವರಿಸಿದರು.

ಪ್ರಸ್ತುತ ಅಧ್ಯಕ್ಷರಾಗಿರುವ ಶ್ರೀ ಎಂ .ಶ್ರೀನಿವಾಸ್ ರವರು 2022 ಜುಲೈ 12ರಂದು ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ  ನೌಕರ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಈಗಾಗಲೇ 2500  ನೌಕರರನ್ನು ಸದಸ್ಯರನ್ನಾಗಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ನೌಕರರ ಆಶೋತ್ತರಗಳಿಗೆ  ಧ್ವನಿಯಾಗಿ ನಿಂತಿದ್ದಾರೆ. ಕೇಂದ್ರ ಸಂಘದ ಸಹಕಾರದೊಂದಿಗೆ ರಾಜ್ಯದಲ್ಲಿ, ನೌಕರರನ್ನು ಒಟ್ಟಾಗಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ . ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಈಡಿಗ ನೌಕರರ ಬೃಹತ್ ಸಂಘಟನೆ ಕಟ್ಟಬೇಕೆಂಬ ಸಂಕಲ್ಪದೊಂದಿಗೆ ದೂರದೃಷ್ಟಿ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.                        

ಕೇಂದ್ರ ಸಂಘ ಹಾಗೂ ನೌಕರ ಸಂಘದ ಪದಾಧಿಕಾರಿಗಳ ಸಾಕಾರದೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ನೌಕರ ಬಾಂಧವರೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ. ಆಯಾ ಜಿಲ್ಲೆಗಳಲ್ಲಿ ನೌಕರರ ಸಮಸ್ಯೆಗಳು, ಕುಂದು- ಕೊರತೆಗಳು ಹಾಗೂ ಪ್ರಸಕ್ತ ಆಗಬೇಕಾಗಿರುವ ಕೆಲಸಗಳ ಕುರಿತಾಗಿ ಮುಕ್ತ ವಿಚಾರ ವಿನಿಮಯ ನಡೆಸಿದ್ದಾರೆ. ಸದಸ್ಯತ್ವ ಅಭಿಯಾನವನ್ನು ಅತ್ಯಂತ ಸರಳಿಕರಣಗೊಳಿಸಿ, ಸ್ಥಳದಲ್ಲೇ ಸದಸ್ಯರಾಗುವ ಮೂಲಕ ಈಗಾಗಲೇ ಹೆಚ್ಚಿನ ಸಂಖ್ಯೆಯ ನೌಕರ ಬಂಧುಗಳು ನೌಕರ ಸಂಘದ ಸದಸ್ಯತ್ವ ಪಡೆದುಕೊಂಡಿದ್ದಾರೆ.. 

ವೆಬ್ಸೈಟ್ ಮೂಲಕ ಸದಸ್ಯತ್ವ ಅಭಿಯಾನ :- ರಾಜ್ಯದ ಹಾಗೂ ರಾಜ್ಯದ ಹೊರಗಡೆ ಇರುವಂತಹ ನೌಕರ ಬಂಧುಗಳು ನೇರವಾಗಿ ಆನ್ಲೈನ್ ಮೂಲಕ ಸದಸ್ಯತ್ವ ಪಡೆದುಕೊಳ್ಳಲು ವೆಬ್ಸೈಟ್ ರೂಪಗೊಳಿಸಿದ್ದಾರೆ. ಈ ಮೂಲಕವಾಗಿ ಈಡಿಗ ನೌಕರ ಬಂಧುಗಳು ಅತ್ಯಂತ ಸರಳವಾಗಿ ಆನ್ಲೈನ್ ಮೂಲಕ ಸದಸ್ಯತ್ವ ಪಡೆಯಬಹುದಾಗಿದೆ. ಈ ವೆಬ್ ಸೈಟ್ ನಲ್ಲಿ ಈಡಿಗ ಸಮಾಜದ ಹಿನ್ನೆಲೆ, ಜನಾಂಗದ ಶ್ರೇಯಸ್ಸಿಗಾಗಿ ಶ್ರಮಿಸಿದ ಸಮುದಾಯದ ಮುಖಂಡರ ಮಾಹಿತಿ, ನೌಕರ ಸಂಘ ರೂಪುಗೊಂಡ ಮಾಹಿತಿ, ಸಂಘದ ಹೋರಾಟಗಳು, ಸಮುದಾಯದ ನೌಕರ ಬಂಧುಗಳ ಮಾಹಿತಿ, ಹೀಗೆ ಸಮಗ್ರ ಚಿತ್ರಣವನ್ನು ನೀಡಲಾಗಿದೆ.

ಎಂ ಶ್ರೀನಿವಾಸ್ ರವರು ಅಧ್ಯಕ್ಷರಾದ ನಂತರ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ: –                                   

  • ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸ ಹಮ್ಮಿಕೊಂಡು ನೌಕರ ಬಂಧುಗಳನ್ನು ಒಗ್ಗೂಡಿಸಿ, ನೌಕರ ಬಂಧುಗಳ ನೇರ ಸಂಪರ್ಕ ಸಾಧಿಸಿದ್ದಾರೆ.                 
  • ಸದಸ್ಯತ್ವ ಅಭಿಯಾನವನ್ನು ಸರಳಿಕರಣ ಗೊಳಿಸಿ 2500 ನೌಕರರನ್ನು ಸದಸ್ಯರನ್ನಾಗಿಸಿದ್ದಾರೆ.    
  • ವೆಬ್ಸೈಟ್ ಆರಂಭಿಸಿ ಆನ್ಲೈನ್ ಮೂಲಕ ಸದಸ್ಯತ್ವ ಪಡೆಯುವ ಸರಳ ಯೋಜನೆಗೆ ಚಾಲನೆ ನೀಡಲಾಗಿದೆ.    
  • ನೌಕರ ಬಂಧುಗಳ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಂತು ರಾಜ್ಯದ ಯಾವುದೇ ಮೂಲೆಯಲ್ಲಿ ನೌಕರ ಬಂಧುಗಳಿಗೆ ಅನ್ಯಾಯವಾದಾಗ ಅವರ ಪರವಾಗಿ ಸಂಬಂಧಿಸಿದ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ( ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ  ನಡೆದ ದಾಳಿ ಪ್ರಕರಣ).
  • NPS ನೌಕರರ ಹಿತ ಕಾಯುವಲ್ಲಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾನ್ಯ ಅಧ್ಯಕ್ಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ನಿಟ್ಟಿನಲ್ಲಿ ರಾಜ್ಯದ ಈಡಿಗ ನೌಕರ ಬಂಧುಗಳು ಕೂಡ ಅಧ್ಯಕ್ಷರೊಂದಿಗೆ ಕೈಜೋಡಿಸಿ ಬೆಂಗಳೂರಿನ ಸ್ವಾತಂತ್ರ್ಯ  ಉದ್ಯಾನದಲ್ಲಿ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
  • 2A ಪ್ರವರ್ಗ ವಿಷಯದಲ್ಲಿ ಜನಾಂಗದ ನೌಕರ ಬಂದುಗಳಿಗೆ ಅನ್ಯಾಯವಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಮಾನ್ಯ ಕೇಂದ್ರ ಸಂಘದ ಅಧ್ಯಕ್ಷರು ಕರೆದ ಸಭೆಗೆ ಹಾಜರಾಗಿ. ರಾಜ್ಯದ ಕಾನೂನು ತಜ್ಞರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ನೌಕರರಿಗೆ ಅನ್ಯಾಯವಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೇಂದ್ರ ಸಂಘಕ್ಕೆ ಸಲಹೆ ನೀಡಲಾಯಿತು.
  • ನೂತನವಾಗಿ ಆಯ್ಕೆಯಾದ ಸಮಾಜದ ಶಾಸಕರನ್ನು ಗೌರವಿಸಿ ರಾಜ್ಯದ ನೌಕರ ಬಂಧುಗಳ ಸಮಸ್ಯೆಗಳಿಗೆ ಸ್ಪಂದಿಸಲು ಕೋರಲಾಯಿತು.
  • ರಾಜ್ಯದ ನೌಕರ ಬಂಧುಗಳನ್ನು ಒಗ್ಗೂಡಿಸಿ ವೈದ್ಯರುಗಳ ವೃಂದ, ಇಂಜಿನಿಯರ್ಸ್ ಗಳ ವೃಂದ, ಹೀಗೆ ಎಲ್ಲಾ ನೌಕರ ಬಂಧುಗಳ ವಿಭಾಗವಾರು ವೃಂದಗಳನ್ನು ರಚಿಸಿ ನೌಕರ ಬಂಧುಗಳ ಪರಸ್ಪರ ಸಹಾಯ ಒದಗಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರತವಾಗಿದೆ.
  • ರಾಜ್ಯದ ವಿವಿಧ ಇಲಾಖೆಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ  ನೌಕರ ಬಂಧುಗಳನ್ನು ಒಗ್ಗೂಡಿಸಿ ಸಮುದಾಯದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ.
  • ವಿಭಾಗವಾರು ನೌಕರರ ಸಮ್ಮೇಳನಗಳನ್ನು ನಡೆಸಲು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಈಡಿಗ ನೌಕರ ಬಂಧುಗಳ ಬೃಹತ್ ಸಮಾವೇಶ ಏರ್ಪಡಿಸಲು ಸಿದ್ಧತೆ ನಡೆಸಲಾಗಿದೆ.

ಹೀಗೆ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಎಂ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕಡಿಮೆ ಸಮಯದಲ್ಲಿ ಸಂಘ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಸಮುದಾಯದ ನೌಕರ ಬಂಧುಗಳು ಸಂಘದೊಂದಿಗೆ ಕೈಜೋಡಿಸಿ ನೌಕರರ ಶ್ರೇಯಸ್ಸಿಗೆ ಬೆಂಬಲವಾಗಿ ನಿಲ್ಲಲು ಈ ಮೂಲಕ ಕೋರಿಕೊಳ್ಳುತ್ತೇವೆ…